Thursday 5 July 2012

ವ್ಯಾಮೋಹ!


ಪರಕೀಯ ತಿಂಡಿಗಳತ್ತ ಒಲವು,
ಹುಟ್ಟದು ಎಂದೂ ನಿಜ ಬಲವು
ಪಿಝಾ ಬರ್ಗರ್ ನಾಮ ಹಲವು

ಬೊಜ್ಜು ಏರಿ ಕೆಟ್ಟೀತು ಚೆಲುವು
ದೌರ್ಬಲ್ಯದಿ ನಲುಗೀತು ನರವು
ಹರಯದಲ್ಲೇ ಮುಪ್ಪಿನ ನೋವು!

ಜೋಕೆ! ಕೈ ಜಾರೀತು ಕಾಲವು
ರೋಗ ಖಚಿತ, ಬಿಡದಲ್ಲಿ ಸೆಳವು
ಹೂಬಾಡೀತು ತಳೆಯದಲ್ಲಿ ನಿಲುವು!

1 comment:

  1. ರಾಗಿ ಮುದ್ದೆ , ಜೋಳದ ರೊಟ್ಟಿ ,ಅನ್ನ ಸಾರು ಇಸ್ಟಿದ್ದರೆ ಸಾಕು ನಮಗೆ.., ಈ ಪೀಜಾ ಬರ್ಗರ್ ಗಳು ರುಚಿಯೇ ಅನ್ನಿಸುವುದಿಲ್ಲ. ತಿಳಿ ಹೇಳುವ ಕವನ ಸೂಪರ್.

    ReplyDelete