Thursday 5 July 2012

ನಿರಂತರ!

ಮತ್ತದೇ ನಡೆತ, ಮತ್ತದೇ ಹೊಡೆತ
ಮತ್ತದೇ ಸೆಳೆತ, ಮತ್ತದೇ ಸವೆತ
ಮತ್ತದೇ ನುಲಿತ, ಮತ್ತದೇ ಬಿಗಿತ!

ಅದೇ ಪಾಠ, ಅದೇ ಆಟ,
ಅದೇ ಕಾಟ, ಅದೇ ಓಟ
ಮುಸುಕಿನೊಳಗಿನ ಗುದ್ದಾಟ!

ಜಗದೊಳಗಿನ ಸವಿ ನೀಡದ ಸುಖ,
ಸೋಗಿನೊಳಗೆ ನಗುತಿರುವ ಮುಖ
ಒಮ್ಮೆ ಸುಮುಖ, ಮತ್ತೆ ವಿಮುಖ!

ಕೈಗೂಡದ ಕನಸ ಹೊತ್ತ ಬಾಳನೌಕೆ
ಕೈಬಿಡದ ಮುತ್ತು ಹವಳದ ಹಾರೈಕೆ
ಸೆಣಸಿದೆ ಮಧ್ಯೆ ಅಗತ್ಯಗಳ ಪೂರೈಕೆ!

ರಸವ ಕಬಳಿಸಿ ವಿರಸ ಮೆರೆವ ಸಮರಸ
ಕಹಿಸೇವನೆಯ ಜತೆ ಭಾವಿ ಸಿಹಿಯಾಭಾಸ
ಗುಂಗಿನ ಬದುಕು, ಪ್ರಾಸ ನಿಲ್ಲದ ಸಮಾಸ!!

1 comment:

  1. ರಸವ ಕಬಳಿಸಿ ವಿರಸ ಮೆರೆವ ಸಮರಸ
    ಕಹಿಸೇವನೆಯ ಜತೆ ಭಾವಿ ಸಿಹಿಯಾಭಾಸ
    ಗುಂಗಿನ ಬದುಕು, ಪ್ರಾಸ ನಿಲ್ಲದ ಸಮಾಸ!!
    :::
    ಚಂದನೆ ಸಾಲುಗಳು..
    ಹೀಗೇ ಸಾಗಲಿ ಅಕ್ಷರ ಯಾತ್ರೆ ನಿರಂತರ...

    ReplyDelete