Monday 9 July 2012

ಭಾವೋತ್ಕರ್ಷ


ಮನದಿ ಚಿಗುರಿದ ಭಾವ ಬಾಂದಳದಿ,
ಜೀವ ಸೇರಿ ಬಾನಾಡಿಯಾಗಿ ಹಾರಿದೆ.
ಹೃದಯಸಮುದ್ರ ಕಲಕಿ ಅಲೆಯೆದ್ದಿದೆ.
ಭಾವಾಂತರಂಗದಲಿ ರಾಡಿ ಎದ್ದಿರಲು,
ಭೋರ್ಗರೆತವ ಕಂಗಳು ಹಿಡಿದಿಟ್ಟಿವೆ !

ಜೀವ ವೀಣೆ ಮೀಟಿ ಝೇಂಕರಿಸಿರಲು,
ಭಾವವಿಹಂಗಕೆ ಜೀವ ಮೇಳೈಸಿರಲು,
ಅಂತರಂಗ ಮೃದಂಗ ತಾಳೈಸುತಿರಲು
ಅಂತರಾಳದೊಡಲು ಓಲೈಸಿ ನಲಿದಿದೆ.
ಒಲವ ಚೆಲುವಿಗೆ ಕಿರುನಗೆ ಮೂಡಿದೆ!

ಸೆಲೆಯ ಚಿಲುಮೆ ಉಕ್ಕಿ ಹರಿದೀತೇ,
ಮನದಿ ಅಳುಕು, ಭಾವೋತ್ಕರ್ಷದಿ,
ಹುಲು ಮಾನವನ ಮೀರಿ ನಗುತಿಹ,
ಬಂಧನಕೆ ಸಿಗದ ಭಾವೋತ್ಕಟತೆಯ
ಸೆಲೆಗೆ ನೆಲೆ, ಲತೆಯ ಕವಿತೆಯಾಗಿ!

2 comments:

  1. ಭಾವದ ಉತ್ಕಟತೆ ಪ್ರತೀ ಸಾಲಿನಲ್ಲು ಮನದುಂಬಿ ಹರಿದಿದೆ. ಈ ಜೀವದ ಭಾವ ಸೆಲೆ ಬತ್ತದರಿರಲಿ. ಮನವನ್ನು ಸ್ಪರ್ಶಿಸುವ ಸೊಗಸಿನ ಸಾಲುಗಳು ಚನ್ನಾಗಿ ಮೂಡಿಬಂದಿದೆ.

    ReplyDelete
    Replies
    1. ಸತೀಶ್ ಅವರೇ ಮೆಚ್ಚಿದ್ದಕ್ಕೆ ಬಹಳ ಧನ್ಯವಾದಗಳು.

      Delete