![]() |
ಚಿತ್ರ ಕೃಪೆ- ಗೂಗಲ್ |
ಭಾವಬಂಧನದಿ ಅಂತ:ಸತ್ವ ಸಿಲುಕಿರೆ,
ಇರಲಾಗದೆ ಬರಲಿಚ್ಛಿಸದೆ ನರಳುತಿರೆ,
ಭಾವಸುಧೆ ನುಂಗಲಾರದ ತುತ್ತಾಗಿರೆ,
ತೊಳಲಾಟದಲಿ ಕಾಣದಾಗಿದೆ ನಿದಿರೆ!
ಕೊಚ್ಚಿ ಹೋಗುವೆನೇ ಈ ಸುಳಿಯೊಳು,
ಪ್ರಕ್ಷುಬ್ಧ ಮೈಮನದ ಬೇಗುದಿಯೊಳು,
ಕೋಲಾಹಲವಿರೆ ಸ್ವಪ್ನಲೋಕದೊಳು,
ನಾನಾಗುತಿಹೆನೇ ಇವುಗಳಡಿಯಾಳು!
ಜೀವ ಸೊಬಗಲಿ ನಾವಿನ್ಯ ಕಾಣುತಿರೆ,
ಮನತಣಿಪ ಮಳೆಗೆ ತನು ಕಾಯುತಿರೆ,
ಸೋಜಿಗದ ಸೊಬಗು ಮೇರೆ ತರುತಿರೆ,
ಒಲವ ಬಲವೇ, ನೀನೆನಗಾಗಿಹೆ ಆಸರೆ!
ನಿಮ್ಮ ಪದ ಜೋಡಣೆ ತುಂಬಾ ಚೆನ್ನಾಗಿದೆ.
ReplyDeleteಸ್ವರ್ಣಾ
ಸ್ವರ್ಣಾ ಅವರೇ, ತಮ್ಮ ಮೆಚ್ಚುಗೆಗೆ ನಾನು ಆಭಾರಿ.
ReplyDelete