Wednesday 11 July 2012

ಒಲವಿನಾಸರೆ

ಚಿತ್ರ ಕೃಪೆ- ಗೂಗಲ್


ಭಾವಬಂಧನದಿ ಅಂತ:ಸತ್ವ ಸಿಲುಕಿರೆ,
ಇರಲಾಗದೆ ಬರಲಿಚ್ಛಿಸದೆ ನರಳುತಿರೆ,
ಭಾವಸುಧೆ ನುಂಗಲಾರದ ತುತ್ತಾಗಿರೆ,
ತೊಳಲಾಟದಲಿ ಕಾಣದಾಗಿದೆ ನಿದಿರೆ!

ಕೊಚ್ಚಿ ಹೋಗುವೆನೇ ಈ ಸುಳಿಯೊಳು,
ಪ್ರಕ್ಷುಬ್ಧ ಮೈಮನದ ಬೇಗುದಿಯೊಳು,
ಕೋಲಾಹಲವಿರೆ ಸ್ವಪ್ನಲೋಕದೊಳು,
ನಾನಾಗುತಿಹೆನೇ ಇವುಗಳಡಿಯಾಳು!

ಜೀವ ಸೊಬಗಲಿ ನಾವಿನ್ಯ ಕಾಣುತಿರೆ, 
ಮನತಣಿಪ ಮಳೆಗೆ ತನು ಕಾಯುತಿರೆ,
ಸೋಜಿಗದ ಸೊಬಗು ಮೇರೆ ತರುತಿರೆ,
ಒಲವ ಬಲವೇ, ನೀನೆನಗಾಗಿಹೆ ಆಸರೆ!

2 comments:

  1. ನಿಮ್ಮ ಪದ ಜೋಡಣೆ ತುಂಬಾ ಚೆನ್ನಾಗಿದೆ.
    ಸ್ವರ್ಣಾ

    ReplyDelete
  2. ಸ್ವರ್ಣಾ ಅವರೇ, ತಮ್ಮ ಮೆಚ್ಚುಗೆಗೆ ನಾನು ಆಭಾರಿ.

    ReplyDelete