Tuesday, 31 July 2012

ಪ್ರೀತಿಯ ರೀತಿ
ಮರೀಚಿಕೆಯಂತಿರುವ ಪ್ರೀತಿ,
ತರುವುದಿದರ ರೀತಿಯೇ ಭೀತಿ!
ಹೊತ್ತಿರಲು ಅರಿಯದ ಆಕೃತಿ,
ಪ್ರೀತಿಯಾಗಿತ್ತು ಬರೀ ಭ್ರಾಂತಿ!

ಕಾದಾಟದ ನಡುವಿನ ಪ್ರೇಮ,
ಪ್ರೀತಿಯ ಸೊಗಡಿಲ್ಲದ ಕಾಮ.
ಗೆದ್ದಿದೆ ಸೋಗಿನ ಜೀವನಕ್ರಮ
ಅರಿಯದೆಂದಿವಕ್ಕೆ ವಿರಾಮ?!

ಕಾನನದಿ ತೊಳಲುವ ಮನ,
ಹಂಬಲಿಸೆ ಕಾಣದಾ ಸವಿತನ.
ಎಲ್ಲೆ ಮೀರೆಂಬ ಪ್ರಚೋದನ,
ರಾಡಿತಳದ ನಗುವಿನ ಜೀವನ!

6 comments:

 1. ಪ್ರೀತಿ ಮರೀಚಿಕೆಯಾದಾಗ ಭೀತಿ ತಂತಾನೆ ಹುಟ್ಟುತ್ತದೆ.. ಸೋಗು,ಮೋಜಿನ ಈ ಜಗದಲ್ಲಿ ನಿಜ ಪ್ರೀತಿಯ ಕಾಣುವುದೆಂತು?? ಅಲ್ಲವೆ ಲತಾ??..

  ReplyDelete
 2. ತುಂಬಾ ಚೆನ್ನಾಗಿದೆ ಡಾಕ್ಟ್ರೆ ನಿಮ್ಮ ಕವನ !!!

  ReplyDelete
 3. ಸಂಸಾರದ ಜಂಜಾಟದ ಸ್ಪಷ್ಟ ಚಿತ್ರಣ.

  ನನ್ನ ಬ್ಲಾಗಿಗೂ ಸ್ವಾಗತ ಮೇಡಂ.

  ReplyDelete
 4. ಪ್ರಸ್ತುತ ಜೀವನದ ನೈಜ ಚಿತ್ರಣವನ್ನು ಹೊಂದಿರುವ ಈ ನಿಮ್ಮ ಕವನ ಬಹಳ ಚೆನ್ನಾಗಿದೆ. ಪದಗಳ ಹೆಣಿಗೆ, ಭಾವ ಲಾಲಿತ್ಯ ಮತ್ತು ನೈಜತೆಯ ಚಿತ್ರಣ ಎಲ್ಲವೂ ಸೂಕ್ತವಾಗಿವೆ. ಧನ್ಯವಾದಗಳು.

  ReplyDelete
 5. ತಮ್ಮೆಲ್ಲರ ಮೆಚ್ಚುಗೆಗೆ ಹಾಗೂ ಪ್ರೋತ್ಸಾಹಕ್ಕೆ ಚಿರಋಣಿ. ತಮ್ಮ ನುಡಿಗಳಿಗೆ ಅನಂತಾನಂತ ಧನ್ಯವಾದಗಳು.

  ReplyDelete