Thursday 5 July 2012

ವಿಪರ್ಯಾಸ!


ಕನಸಲಿ ಮೈ ಮರೆತು ಬೀಳುವಂತಿಲ್ಲ
ವಾಸ್ತವದ ರಾಗವ ಕೇಳದಿರುವಂತಿಲ್ಲ.
ಹಿಡಿದು ಬಾಳಿಲ್ಲ, ಬಿಟ್ಟು ಜೀವಿಸುವಂತಿಲ್ಲ.
ಎರಡು ದೋಣಿಯ ಪಯಣ ನಿಲ್ಲುವಂತಿಲ್ಲ!

ಕನಸಲಿ ಜೀವಸುಧೆ ಸುಲಲಿತ, ಸರಳ
ನನಸಲಿ ಮೌನ, ಸಮಯವೇ ವಿರಳ!
ಒಮ್ಮೆ ಜೇನು, ಮತ್ತೊಮ್ಮೆ ಮಾದಳ,
ಆಳವಿಳಿದರೂ ಸಿಗದ ಮುಕ್ತಾಪ್ರವಾಳ!

ಕನಸಲಿ ಎದೆಗುಂದದ ಕೆಚ್ಚೆದೆಯ ಉಲ್ಲಾಸ
ಕುಂದಿಸಲೇ ಕಾದಿಹ ವಾಸ್ತವದ ಪ್ರಯಾಸ!
ಸೋತು ಗೆಲುವ ಗೆದ್ದು ಸೋಲುವ ಆಭಾಸ
ಹೆಣೆಸಿ, ಮಣಿಸಿ ನಗುವ ವಿಕಟ ವಿಪರ್ಯಾಸ!

2 comments:

  1. ಜೀವನ ಅಂದ್ರೆ ಇದೆ ಅಲ್ಲವೇನ್ರಿ ಮೇಡಂ , ಚೊಲೋ ಐತ್ರಿ , ಹೊಸ ಪದಗಳ ಬಳಕೆ, ಮಾದಳ, ಮುಕ್ತಪ್ರವಾಳ, ನಾನು ಇ ಮುಂಚೆ ಕೇಳಿರಲಿಲ್ಲ. ಚೆನ್ನಾಗಿದೆ ಕವನ.

    ReplyDelete
    Replies
    1. ಸುನೀಲ್ ಅವರೇ, ಧನ್ಯವಾದಗಳು.

      Delete