Tuesday 8 July 2014

ಅಂತರಂಗದ ಸಂಗ!


ಸುತ್ತ ಕಿಕ್ಕಿರಿದಿರೆ ಬೇಡವೆಂಬಾಗ,
ಸನಿಹವಾರು ಇಲ್ಲ ಬೇಕೆನ್ನುವಾಗ
ಹಗಲಿರುಳು ಕಳೆಯುತಿರೆ ಸರಾಗ
ಒಂಟಿಯಾಗಿದೆಯೆನ್ನ ಮೌನರಾಗ

ಒಳದನಿ ಕುಗ್ಗಿ ಅಡಗುತಿರುವಾಗ
ಛಂಗನೆದುರು ಹಾರಿದೆ ನೀನಾಗ!
ಬೆರಗಾಗಿ ಅರೆಕ್ಷಣ ನೋಡಲಾಗ,
ನನ ರೂಪ ನೀ ತಾಳಿ ನಲಿವಾಗ!

ಈ ಮುನಿಸನರಿಯಬಲ್ಲೆ ನಾನೀಗ
ಮರೆತಿದ್ದೆ ನಾ ಸುಖದಿ ಮೆರೆದಾಗ
ನಿನ್ನ ನೆನಪಿಲ್ಲ ಕೊರಗಿ ಬಿಕ್ಕುವಾಗ
ಬಳಿಯೇ ನಿಂದು ಸವರಿದ್ದೆಯಾಗ!

ಅರಿತೆನಿಂದು ಅಂತರಾತ್ಮದ ಕೂಗ,
ಕ್ಷಣಿಕ, ಚಿರವಲ್ಲ ಜಗದಿ ಅನುರಾಗ,
ನನಗೆ ನಾನೇ ಅಂತರಂಗದ ಸಂಗ,
ಭವಸಾಗರವ ದಾಟಿಸುವ ಅಂಬಿಗ!

4 comments:

  1. This comment has been removed by the author.

    ReplyDelete
  2. very logical, narrative-like writing

    ReplyDelete
  3. ಅಂತರಂಗದ ಶಕ್ತಿಯ ನಂಬಿಕೊಂಡವರಿಗಿಲ್ಲ ಸೋಲುವ ಭಯ. ಹೊರ ಅನುರಾಗಗಳು ಕ್ಷಣಿಕಾನಂದಗಳಷ್ಟೇ ಬರಿಯ ಸೋಗು!

    ReplyDelete