Thursday, 24 July 2014

ನಾನೆಂತು ಮರೆಯಲಿ?!



ನಾ ನಿನ್ನ ಕೇಳಲಾರೆ ನನ್ನ ನೆನಪಿದೆಯೇ ಎಂದು
ನೆನಪಿದ್ದೂ ಮಾತಾಡದಿರುವ ಮನಸಲ್ಲ ನಿಂದು!

ನಾ ನಿನ್ನ ಮನದಲಿಲ್ಲ ಎಂಬ ಕೊರಗಿಲ್ಲ ನನಗೆ,
ಯಾಚಿಸಲು ಪ್ರೀತಿ ಭಿಕ್ಷೆಯಲ್ಲ ಗೊತ್ತದು ನಿನಗೆ!

ನನ್ನೆದೆಯಲಿ ನಿನ್ನ ಕಟ್ಟಿಹಾಕಿ ಗೋಗರೆಯಲಾರೆ,
ಒಲವು ಬಂಧವಲ್ಲವೆಂಬುದ ನಾ ಮರೆಯಲಾರೆ!

ನನ್ನ ಮರೆತು ಬದುಕುವ ಹಕ್ಕೆಂದಿಗೂ ನಿನಗಿದೆ.
ನಿನ್ನ ಪ್ರೇಮದ ಕಂಪು ನನ್ನಲಿನ್ನೂ ಹಸಿಯಾಗಿದೆ!

1 comment:

  1. ಅಮಿತವಾಗಿ ಪ್ರೀತಿಸುವ ಜೀವವೊಂದು ತನ್ನ ಪ್ರೇಮಿಯನ್ನು ಕಾಡದೇ ಬೇಡದೇ ಒಲುಮೆಯನ್ನು ಉಳಿಸಿಕೊಳ್ಳುವ royal ಪದ್ದತಿ ನೆಚ್ಚಿಗೆಯಾಯಿತು.

    ReplyDelete