Wednesday 25 June 2014

ಮನಮಂದಿರ


ಎದೆಯಳೊಂದು ಮೂರ್ತಿ ಕೆತ್ತಿ
ಮನವ ಸೆಳೆದ ರೂಪ ನೀಡಿ
ಪ್ರೇಮ ಕಲಶವಿಟ್ಟೆನು.

ನವನವೀನ ಭಾವ ತುಂಬಿ
ಪ್ರೀತಿಸುಮದ ಹಾರವಿತ್ತು
ನೆಚ್ಚ ಪೂಜೆ ಗೈದೆನು.

ಮನದ ಹೊಗೆಯ ಹೊರಗೆ ತೂರಿ
ಒಲುಮೆ ಗಾಳಿಯಾಡಲೆಂದು
ತೆರೆದ ಬಾಗಿಲಿಟ್ಟೆನು.

ಮಮತೆ ಹಣತೆಯಲ್ಲಿ ಹಚ್ಚಿ,
ಸೊಗದ ಶರಧಿಯಲ್ಲಿ ಮಿಂದು,
ಮೆಚ್ಚಿ ತಪವ ಗೈದೆನು.

ದ್ವೇಷ ಮರೆಸಿ ಸ್ನೇಹ ಬೆಳೆಸಿ
ಸತತ ಬಿಡದೆ ಸಕಲ ಮನದೆ,
ಒಲವ ಧ್ಯಾನ ನಡೆಯಲಿ.

1 comment:

  1. 'ನವನವೀನ ಭಾವ ತುಂಬಿ' ಹೊಸ ಪರಿಯಲಿ ಒಲುಮೆ ಜಾರಿಯಲಿ ಇಟ್ಟಾಗಲೇ ತಾನೇ ಸಾಂಗತ್ಯಕ್ಕೂ ಹೊಸತನ,
    'ಸತತ ಬಿಡದೆ ಸಕಲ ಮನದೆ' ಸಂಪೂರ್ಣ ಪ್ರೇಮ ಕೊಟ್ಟರೆ ತಾನೇ ಅತ್ತಲಿಂದಲೂ ಪರಿಪೂರ್ಣ ಪ್ರೇಮಾಲಿಂಗನ?

    ಒಲುಮೆಯ ಸಾಕ್ಷಾತ್ಕಾರಕ್ಕೆ ತಕ್ಕುದಾದ 'ಪ್ರಾರ್ಥನಾ ಗೀತೆ' ಈ ಕವನ. ಉಘೇ... ಉಘೇ...

    ReplyDelete