Wednesday 19 November 2014

ಜೀವನ-ಕವನ



ಬಲವೆಷ್ಟಿದ್ದರೂ ನೀರೆರೆಯದಿರೆ
ಬದುಕೀತೇ ಹೊಲ?
ಛಲವೆಷ್ಟಿದ್ದರೂ ಬೆವರಿಳಿಯದಿರೆ
ದೊರಕೀತೇ ಫಲ?

ಬಯಕೆಯೆನಿತಿರಲು ಕೃತಿಯಿರದೆ
ಭವಿಸೀತೇ ಕನಸು?
ಮೋಹವೆನಿತಿರಲು ಪ್ರೀತಿಯಿರದೆ
ಸವಿದೀತೇ ಮನಸು?

ಜೀವಜಲದೊರತೆಯೇ ಬತ್ತಿರಲು
ಅಳಿಯದೇ ಚಿಲುಮೆ?
ಭಾವಸೆಲೆಯೊರತೆಯೇ ನಿಂತಿರಲು
ಉಳಿವುದೇ ಒಲುಮೆ?

ಪದಗಳೆನಿತಿರಲು ತುಡಿತವಿರದಿರೆ
ಆಗುವುದೇ ಕವನ?
ಬಂಧಗಳೆನಿತಿರಲು ಮಿಡಿತವಿರದಿರೆ
ಸಾಗುವುದೇ ಜೀವನ?

3 comments:

  1. ಸ್ವಪ್ರಯತ್ನವಿರದೆ ಅವಿರತ ದುಡಿಮೆ ಇರದೆ ಸಿಕ್ಕಲಾರದು ಯಶಸ್ಸು ತಾನು.
    ವ್ಯಕ್ತಿತ್ವ ವಿಕಸನದ ಕವನ.

    ReplyDelete
  2. ತುಂಬಾ ಚೆನ್ನಾಗಿದೆ ಕವನ. ಒಂದಕ್ಕೊಂದರ ಪೂರಕತೆಯ ಮತ್ತು ಆ ಪೂರಕತೆಯ ಅನಿವಾರ್ಯತೆಯನ್ನು ಸುಂದರವಾಗಿ ಹೆಣೆದಿದ್ದೀರಿ.

    ಸವಿಯಾದ ಬಿಸ್ಕತ್ತು
    ಎದುರಿಗಿದ್ದರೂ
    ತಿನದಿದ್ದರೆ
    ಸವಿದೀತೆ ನಾಲಿಗೆ?

    ReplyDelete