Sunday 28 September 2014

ಹೀಗೊಂದು ಕಥೆ(ವ್ಯಥೆ?)


ನನ್ನ ಜೀವ ನೀನೆಂದ,
ಚಂದಕಿಂತ ಚಂದ ಎಂದ.
ಇಬ್ಬರ ಭಾವದ ಮಿಡಿತವೊಂದೇ,
ತುಡಿತವೊಂದೇ ಎಂದ.
ಅವಳೋ,
ಭಾವೋತ್ಕಟತೆಯಲಿ ಮಿಂದೆದ್ದಳು.
ಅವನೋ, ತನುಮನವನಾವರಿಸಿ,
ಅವಳ ದಿನಚರಿಯಾದ!
ಹುಸಿಯಿರಲಿಲ್ಲ, ಹಸಿಯಿರಲಿಲ್ಲ,
ನಂಬದಿರಲು!

ಕೆಲವೇ ದಿನಗಳಲಿ ’ಕ್ಷಮಿಸು’ ಎಂದ.
ಮಾತು ತೊರೆದು ನಿರ್ಲಿಪ್ತನಾದ.
ಸೋಗೋ, ಕೊರಗೋ ಅರಿಯಳು.
ಆಗ ಮಂಕು ಕವಿದಿತ್ತೋ,
ಈಗ ಸರಿದಿತ್ತೋ ಗೊತ್ತಿಲ್ಲ!

ಬಾಳು ಮರುಭೂಮಿಯಾದೊಡೆ
ಮೃಗತೃಷ್ಣೆಗಳು ಸಹಜವೆಂಬ
ಸತ್ಯದರ್ಶನವಾಯ್ತು!
ಅವಳಿಗೀಗ ಒಂದೇ ದಾರಿ
ನಂಬಿಸಿಕೊಳ್ಳಬೇಕು,
ಸಿಕ್ಕಿದ್ದು ಒಯಸಿಸ್ ಅಲ್ಲ,
ಮರೀಚಿಕೆಯಷ್ಟೇ!
ಕೆಲವರ ಜೀವನ ಹೀಗೇ ಏನೋ
ಎಪ್ರಿಲ್ ೧ ವರ್ಷದಲಿ,
ಬಹಳ ಸಲ ಬರುವುದೇನೋ?!!

1 comment:

  1. ನನ್ನಂತ ಪೆದ್ದರಿಗಾಗಿ ಮನೋ ಗೀತೆ ಬರೆದುಕೊಟ್ಟಿದ್ದೀರಿ.
    ಎದೆಯೊಳ ಉಳಿವ ಭಾವ:
    'ಸಿಕ್ಕಿದ್ದು ಒಯಸಿಸ್ ಅಲ್ಲ,
    ಮರೀಚಿಕೆಯಷ್ಟೇ!'

    ReplyDelete