Thursday 19 September 2013

ತೊರೆದು ಜೀವಿಸಬಹುದೇ?



ಹುಲುಸಾಗಿವೆ ನನಸಾಗದ ಕನಸುಗಳು
ಮರೆಯಲು ಮನಸಾಗದ ನೆನಹುಗಳು
ಹಳತಾದರೂ ಹಸಿರಾಗಿರುವ ಛವಿಗಳು
ನೆನಪಿನಂಗಳದ ಈ ಬಾಡದ ಹೂಗಳು!

ಕ್ಷಣದಿ ಕಣ್ಮುಂದೆ ನಲಿದಾಟದ ದಿನಗಳು
ಚಿಣ್ಣರಂಗಳದ ಸಿಹಿ-ಕಹಿದೃಶ್ಯಾವಳಿಗಳು
ಹರೆಯ ಹರಿದಂತೆ ಕಂಗಳ ಮಾತುಗಳು
ಕನಸಲಿ ಲೋಕ ಮರೆತ ಸವಿ ದಿನಗಳು!

ಬದುಕು ಎಡವಿಸಿ ಕಲಿಸಿದ ಪಾಠಗಳು,
ಬೆಳೆಸಲು ಕಣ್ತೆರೆಸಿದ ಬಾಳಿನ ಕ್ಷಣಗಳು

ನೋವಲೂ ನಲಿವಿನ ಚಿನ್ನದ ಗೆರೆಗಳು,
ಉರಿದು ಎಚ್ಚರಿಸುವ ದಾರಿದೀಪಗಳು!

ಇಂದಿನವು ನಾಳೆ ರಂಜಿಸುವ ಪಟಗಳು,
ಕಸುವಿಳಿದರೂ ಬಲಕುಗ್ಗದ ಪ್ರತಿಮೆಗಳು
ಎಂದೂ ತೊರೆಯದ ಆಪ್ತ ಬಂಧುಗಳು,
ಬಾಳ ಹೊಳಪ ಕಾದಿಡುವ ಗುಜರಿಗಳು!

2 comments:

  1. ಬದುಕು ನಿರಂತರ ಪಾಠ ಶಾಲೆ ಎನ್ನುವುದನ್ನ ಸುಂದರವಾಗಿ ಕಟ್ಟಿಕೊಟ್ಟಿದ್ದೀರ ಮೇಡಂ.

    ReplyDelete
  2. nimma nalnuDigaLige tumbu hridayada dhanyavaadagaLu.

    ReplyDelete