Monday 17 June 2013

ಶಕ್ತಿ

 
ನನ್ನ ಒಂದು ತೈಲವರ್ಣ ಚಿತ್ರ

ನವಿರಾದ ತಂಗಾಳಿ ಸೋಕಲು,
ಬರುವ ಮಳೆಯ ನೆನಪಿಸಿರಲು
ನಾನಾಗುತಿಹೆ ನಿನ್ನೆಯ ಪಾಲು!

ಸಂಧ್ಯಾರಾಗ ಜತೆ ಕರಿಮುಗಿಲು,
ನಭ ತಾ ನೇರಳೆಯಾಗುತಿರಲು,
ಮನ ತೂಗಿದೆ ನೆನಪ ತೊಟ್ಟಿಲು!

ಸವೆದ ದಾರಿಯ ದಿಟ್ಟಿಸೆ ಕಂಗಳು,
ಹಿತವಾಗಿ ಹರಿವ ಹಾಲ್ನೆನಹುಗಳು
ಕಿವುಚಿ ಸರಿವ ಆ ಹಳೆನೋವ್ಗಳು!

ಎದುರಿರೆ ಅರಿಯದ ತಿರುವುಗಳು,
ಅನುಭವ ಪಾಠವೀ ನೆನಪುಗಳು,
ಇಕ್ಕೆಲದಿ ಜ್ವಲಂತವೀ ದೀಪಗಳು!

ಜಿನುಗುಹನಿಗಳು ಬಲಿಯುತಿರಲು,
ಶುಚಿಯಾಗುತಿರೆ ಎನ್ನೊಳಮಜಲು,
ಆ ನಾಳೆಗಿವೇ ಎನ್ನ ದೃಢಕಾವಲು!

4 comments:

  1. ವಾಹ್ ತುಂಬಾ ಚೆನ್ನಾಗಿದೆ ಕವನ ...

    ReplyDelete
  2. ನಾನಾಗುತಿಹೆ ನಿನ್ನೆಯ ಪಾಲು! ಎಂತಹ ಅರ್ಪಣಾಭಾವ ಕವಿಯತ್ರೀ
    ಹಿತವಾಗಿ ಹರಿವ ಹಾಲ್ನೆನಹುಗಳು ಇದೇ ಬದುಕಿನ ನಿಜ ಮಜಲು
    ಆಮೇಲೆ, ಆ ನಾಳೆಗಿವೇ ಎನ್ನ ದೃಢಕಾವಲು!
    ಅದೇ ಹೆಂಗೆಳೆಯರ ಮನೆ ತಿದ್ದುವ ಪರಿ ಮತ್ತು ಒಲುಮೆಯ ಅಗಾಧತೆ.

    ReplyDelete
  3. ಅಚ್ಚುಕಟ್ಟಾಗಿ ಬಾವಗಳ ಸೆರೆಹಿಡಿದ್ದಿದ್ದೀರಾ.. ಇಷ್ಟವಾಯಿತು.

    http://mounaveene.blogspot.in

    ReplyDelete
  4. mechchida tamagellarigoo bhaavapoorNa dhanyavaadagaLu

    ReplyDelete