Friday 24 May 2013

ಮಾಯಾಬಜಾರ್




ಜಗವನಾವರಿಸಿರೆ ಮಿಥ್ಯೆಯ ಮಾಯೆ
ಮುಸುಕಲಿ ಮರುಗಿದೆ ಸತ್ಯದ ಛಾಯೆ
ಬೇತಾಳನಾಗಿ ತಾ ನೆರಳಲಿ ಸೇರಿರೆ,

ಅರಿಯದೇ ಕವಿಪ ಮಾಯಾಪ್ರಕ್ರಿಯೆ.
 
ಬಿಡಿಸಿಕೊಂಬೆನೆಂದರೂ ಬಿಡದ ಜಾಲ
ಬುವಿಯಾಗಸ ಪಸರಿಸಿಹ ರಕ್ಕಸ ಆಲ
ಮಾತ್ರ ತಣಿಸದಿದೆಂದೂ ಕ್ಷಣ ಕಾಲ,
ಜೀವವ ನೋಯಿಸುವ ಹಾಲಾಹಲ!

ಮರೀಚಿಕೆಯಂದದಿ ಬರಸೆಳೆವ ಪಾಶ,
ವಿವೇಕ ಮಣಿಸುವ ಮಾವುತನಂಕುಶ.
ಈ ಮಾಯಾಬಜಾರಿನ ಕ್ಷಣಿಕ ತೋಷ
ಪುತ್ಥಳಿಗಳೆಮಗೆಲ್ಲಿದೆ ಮೀರ್ವ ಪೌರುಷ

ದೇವಾದಿದೇವರನು ಮಣಿಸಿಹ ರಾಗ
ಧೀಧೃತಿಗೆ ಸವಾಲಿಡುವುದು ಆಗೀಗ.
ಮಿಥ್ಯಾಚಕ್ರವ್ಯೂಹವ ಭೇದಿಸಬೇಕೀಗ,
ಹರಸಾಹಸಗೈದು ಸತ್ಯ ಗೆಲ್ಲಬೇಕೀಗ.



(ತಿಳಿಯದವರಿಗೆ: ರಾಗ-ಅರಿಷಡ್ವರ್ಗಾದಿ ಮಾನಸ ಅವಗುಣಗಳು)

5 comments:

  1. ಅರಿಷಡ್ವರ್ಗಾದಿ ಮಾನಸ ಅವಗುಣಗಳು ನಮ್ಮನ್ನು ಅನುಕ್ಷಣ ಪೀಡಿಸಿ ಮಾಯೆಗೆ ಕೆಡವುವ ಘಾತಕಗಳು.

    ಭಾವ - ಲಯ - ಪ್ರಾಸ - ಪೋಣಿಸಿದ ರೀತಿ ಎಲ್ಲವೂ ಅಮೋಘ.

    "ವಿವೇಕ ಮಣಿಸುವ ಮಾವುತನಂಕುಶ" ತುಂಬಾ ನಿಜವಾದ ಮಾತು.

    ReplyDelete
    Replies
    1. ಹೃತ್ಪೂರ್ವಕ ಧನ್ಯವಾದಗಳು ಬದರಿಯವರೇ.

      Delete
  2. ಪುತ್ಥಳಿಗಳೆಮಗೆಲ್ಲಿದೆ ಮೀರ್ವ ಪೌರುಷ - ಮಾನವನ ನಿಜ ಬಣ್ಣ ಸಾರುವ ಸಾಲುಗಳು. ಚೆನ್ನಾಗಿ ರಸವತ್ತಾಗಿ ಪೋಣಿಸಿದ್ದೀರಿ ಜೀವನ ಮಾಯಾಜಾಲವನ್ನು ಕಾವ್ಯ ಮಾಲೆಯಲ್ಲಿ. ಮೆಚ್ಚುಗೆಗಳು !

    ReplyDelete
  3. ಮರೀಚಿಕೆಯಂದದಿ ಬರಸೆಳೆವ ಪಾಶ,
    ವಿವೇಕ ಮಣಿಸುವ ಮಾವುತನಂಕುಶ.

    ಲತಾವ್ರೇ...ಸುಂದರ ಸಾಲುಗಳು... ತೋಷ- ಇದರ ಅರ್ಥ ಏನು..?? ಸಂತಸ ಅಥವಾ ಸಂತೋಷವೇ..??

    ReplyDelete
  4. ಮೆಚ್ಚಿದ ಸಹೃದಯರಿಗೆ ಧನ್ಯವಾದಗಳು. ಹೌದು ಸರ್, ತೋಷ=ಸಂತೋಷ.

    ReplyDelete