ಅರಿವಿರಲಿ, ಅವರಿವರಿಗಿಲ್ಲಿ ನಾವವರಿವರು!
ಅವರಿವರಿಗರಿವು ತರಿಸಲಿಹದಿ ಸರಿಯಾರು?
ಅವರಿವರಿಗಿವರವರಿಗೆ, ಬೆರಳ ತೋರ್ವರು,
ತಾವೇ ಅರಿವಿನತ್ತ ನಡೆವ ಪರಿಯದೇ ಸರಿ!
ಅರಿವಿಂದು ಉದ್ಧರಿಸಲವರಿವರ ಬದುಕು!
ನಮ್ಮಂಥ ಜ್ಞಾನಿಗಳಿಗಲ್ಲವೇ ಈ ಸರಕು!
ಅವರಿವರು ನಮಗೆ ಹೀಗೆ, ಹಾಗಿರಬೇಕು,
ಇವರಿಂದರಿತು ಅವರ ಮೇಲೆ ಹೇರಬೇಕು!
ಅವರಿವರ ಬಿಟ್ಟು ಅಂತರ್ಮುಖವಿರಲರಿವು,
ಪ್ರತಿಯೋರ್ವ ಕಾಂಬ ಅವರಿವರಲೊಲವು.
ಜಗವ ತಿದ್ದುವುದಕಿಂತ ಮೇಲಿದರ ಸುಖವು,
ನಿನ್ನೆಯಿಂದಿನಿತು ಬೆಳೆವುದೇ ನಿಜ ಗೆಲುವು!
ಅರಿವಿನ ನಿಜ ಪಾಠ ನಿಮ್ಮ ಕವನ. ಪದಗಳನ್ನು ಬಗ್ಗಿಸಿ, ಆಟದಂತೆ ಬಳಸಿಕೊಂಡ ಪರಿ ಅಮೋಘ.
ReplyDeleteಪದ್ಯದ ಮೊದಲ ಭಾಗ ಕೊಟ್ಟ ಕಷ್ಟದಿಂದ,
ReplyDeleteಅರಿವು ಏಷ್ಟು ಕಷ್ಟ ಅನ್ನೋದು ಅರಿವಾಯ್ತು ;)
dhanyavaadagaLu :)
ReplyDelete