Friday 3 May 2013

ಅವರು-ಇವರು-ನಾವು


ಅರಿವಿರಲಿ, ಅವರಿವರಿಗಿಲ್ಲಿ ನಾವವರಿವರು!
ಅವರಿವರಿಗರಿವು ತರಿಸಲಿಹದಿ ಸರಿಯಾರು?
ಅವರಿವರಿಗಿವರವರಿಗೆ, ಬೆರಳ ತೋರ್ವರು,
ತಾವೇ ಅರಿವಿನತ್ತ ನಡೆವ ಪರಿಯದೇ ಸರಿ!

ಅರಿವಿಂದು ಉದ್ಧರಿಸಲವರಿವರ ಬದುಕು!
ನಮ್ಮಂಥ ಜ್ಞಾನಿಗಳಿಗಲ್ಲವೇ ಈ ಸರಕು!
ಅವರಿವರು ನಮಗೆ ಹೀಗೆ, ಹಾಗಿರಬೇಕು,
ಇವರಿಂದರಿತು ಅವರ ಮೇಲೆ ಹೇರಬೇಕು!

ಅವರಿವರ ಬಿಟ್ಟು ಅಂತರ್ಮುಖವಿರಲರಿವು,
ಪ್ರತಿಯೋರ್ವ ಕಾಂಬ ಅವರಿವರಲೊಲವು.

ಜಗವ ತಿದ್ದುವುದಕಿಂತ ಮೇಲಿದರ ಸುಖವು,
ನಿನ್ನೆಯಿಂದಿನಿತು ಬೆಳೆವುದೇ ನಿಜ ಗೆಲುವು!

3 comments:

  1. ಅರಿವಿನ ನಿಜ ಪಾಠ ನಿಮ್ಮ ಕವನ. ಪದಗಳನ್ನು ಬಗ್ಗಿಸಿ, ಆಟದಂತೆ ಬಳಸಿಕೊಂಡ ಪರಿ ಅಮೋಘ.

    ReplyDelete
  2. ಪದ್ಯದ ಮೊದಲ ಭಾಗ ಕೊಟ್ಟ ಕಷ್ಟದಿಂದ,
    ಅರಿವು ಏಷ್ಟು ಕಷ್ಟ ಅನ್ನೋದು ಅರಿವಾಯ್ತು ;)

    ReplyDelete