Tuesday 1 January 2013

ಚಿರನೂತನ!


ಪ್ರತಿ ಕ್ಷಣಗಳಾಗವೇ ಹೊಸತು,
ಸೇರಿರೆ ಮನದಿ ಸಂತಸವಿನಿತು!

ಪ್ರತಿಯಡಿ ನೀಡದೇ ಹೊಸದಾರಿ
ಹರಿದಿರೆ ಆತ್ಮ ವಿಶ್ವಾಸದ ಝರಿ!

ಪ್ರತಿನಗುವೀಯದೇ ನವಬಂಧು,
ಬೆರೆತಿರೆ ನಿರ್ಮಲಸ್ನೇಹ ಮಧು!

ಪ್ರತಿ ಮಾತಾಗದೇ ಹೊಸಕಾವ್ಯ
ತುಂಬಿರೆ ಪ್ರಬುದ್ಧ ಭಾವಲಾಸ್ಯ!

ಪ್ರತಿಕಿರಣ ಕಾಣದೇ ಹೊಸನಾಡು
ಭದ್ರಿಸಿರೆ ನಾಗರೀಕತೆಯ ಬೀಡು!

ಪ್ರತಿ ನಿಮಿಷವೂ ಹೊಸ ಹರುಷ,
ಎಲ್ಲರಿಗೆ ತರಲೀ ಹೊಸ ವರುಷ!

ಸಮಸ್ತರಿಗೂ ಹೊಸ ವರ್ಷದ ಶುಭಾಶಯಗಳು.

3 comments:

  1. ಎಲ್ಲದರಲ್ಲೂ ಸದಾಕಾಲ ಹೊಸತನ್ನೇ ಕಾಣುವ ನಿಮ್ಮ ಕಾವ್ಯದ ಭಾವ ತುಂಬಾ ಸುಂದರ.

    ReplyDelete
  2. ಪ್ರತಿಯು ಸಂಪ್ರತಿಯಾಗುವ ಹುರುಪನ್ನು ತುಂಬುವ ಕವಿತೆ.

    ReplyDelete
  3. ಚೆನಾಗಿದೆ ಮೇಡಮ್...ನಿಮಗೂ ೨೦೧೩ ಹಿತ ತರಲಿ..ಮತ್ತಷ್ಟು ಅಂದದ ಕವಿತೆಗಳು ನಿಮ್ಮ ಬ್ಲಾಗಿನಲ್ಲಿ ಬರಲಿ :) :)

    ReplyDelete