Thursday 11 October 2012

ಕನಸು-ಮನಸು (ದ್ವಂದ್ವ)



ಕನಸಿಗೆಂದೂ ಉಲ್ಲಾಸದ ಸೊಗಸು,
ಮನಸಿಗಿದ ಕಂಡು ಸದಾ ಮುನಿಸು!
ದೇಹಕಿಬ್ಬದಿಯಲಿ ಇರಿಸು ಮುರಿಸು,
ಮೂಕನಾಗಿಹ ನಾ ಬರೀ ಜಿಜ್ಞಾಸು!

ಕನಸಲಿ ಗರಿಬಿಚ್ಚಿ ಸ್ವಚ್ಛಂದದ ನೃತ್ಯ,
ಹಂಗಿಲ್ಲದ ಜಗದಿ ಸುಖದ ಅಧಿಪತ್ಯ.
ಮನಸಿನಲಿ ನೂರು ಮುಖದ ದೈತ್ಯ,
ಬಿಗಿಹೆಚ್ಚಿಸಲು ಭವಬಂಧನದ ದಾಸ್ಯ.

ಕನಸಿಗೆ ಕಡಿವಾಣವನಿಡುವ ಬೇಡಿಕೆ,
ನಡೆಸಿ ಸಾಕಾರರೂಪಿ ಕನಸ ಆರೈಕೆ.

ವರ್ತುಲದಿ ರಹದಾರಿಯೆಳೆವ ಬಯಕೆ,
ದ್ವಂದ್ವತುಮುಲಕೆ ವಿರಾಮ ಹಾರೈಕೆ!

2 comments:

  1. ದ್ವಂದ್ವ ತುಮುಲಕ್ಕೆ ಒಂದು ವಿರಾಮ ಚೆನ್ನಾಗಿದೆ. ಕವಿತೆಯ ಅಂತ್ಯದಲ್ಲಿ ಕನಸಿಗೆ ಕಡಿವಾಣ ಹಾಕಿ ಗುರಿಮುಟ್ಟುವ ತವಕದ'ಕರೆ' ಹಿತವೆನಿಸಿತು.

    ReplyDelete
  2. ಕನಸುಗಳು ಮಾನವನ ಅಧೀನವಾಗಿರುವುದಿಲ್ಲ ಎಂಬ ಅರಿವಿದ್ದರೂ, ಅವುಗಳಿಗೆ ಕಡಿವಾಣ ಹಾಕಿ, ಸಾಕಾರಗೊಳ್ಳಬಹುದಾದ ಕನಸುಗಳನ್ನಷ್ಟೇ ಆರೈಕೆ ಮಾಡಲು ಶಕ್ತನಾಗುವಂತೆ ಮಾಡೆನ್ನುವ ಬೇಡೀಕೆ ಸ್ವೀಕಾರಾರ್ಹ!
    ಮನದೊಳಗೆ ಸದಾ ಇರುವ ದ್ವಂದ್ವ ತುಮುಲಕ್ಕೆ ವಿರಾಮ ಎಳೆಯುವ ಬಯಕೆಯಿಂದ ಪೂರ್ಣವಿರಾಮವಲ್ಲವಾದರೂ ಅಲ್ಪವಿರಾಮ ಎಳೆಯಲು ಸಾಧ್ಯ!

    ReplyDelete