ಬಂತದೋ ನೋಡಿಲ್ಲಿ ಹೊಸ ವರುಷ,
ತಂತದೋ ಮಡಿಲಲ್ಲಿ ಜಗಕೆ ಹರುಷ.
ಬಾಡಿದ ಮೊಗ್ಗರಳಿಸುವ ಪನ್ನೀರಾಗಿ
ಬಿರಿದ ಬುವಿಗೆ ಮುಸಲಧಾರೆಯಾಗಿ
ಕುಸಿದ ಕಸುವಿಗೆ ಚೇತ:ಸಿಂಧುವಾಗಿ
ಒಡೆದ ಮನವ ಬೆಸೆವ ಸೇತುವಾಗಿ,
ಬಂತದೋ ನೋಡಿಲ್ಲಿ ಹೊಸ ವರುಷ,
ತಂತದೋ ಮಡಿಲಲ್ಲಿ ಜಗಕೆ ಹರುಷ.
ಆರುತಿಹ ದೀಪಕ್ಕೆ ತೈಲವನ್ನೆರೆಯುತ್ತ
ಸೋರುತಿಹ ಮಾಡನ್ನು ಸರಿಪಡಿಸುತ್ತ
ಅದುರುತಿಹ ಬುನಾದಿಯನು ಭದ್ರಿಸುತ್ತ,
ಕೊನರುತಿಹ ಭರವಸೆಗೆ ನೀರೆರೆಯುತ್ತ
ಬಂತದೋ ನೋಡಿಲ್ಲಿ ಹೊಸ ವರುಷ,
ತಂತದೋ ಮಡಿಲಲ್ಲಿ ಜಗಕೆ ಹರುಷ.
ಹೊಸ ಅವಕಾಶ, ಹೃನ್ಮನ ತೆರೆಯಲು,
ಸಮಯವಿದು ಕಳೆ ಕಿತ್ತು ಹಸನಾಗಿಸಲು
ಹೊಗೆಯಾರಿಸಿ ಸ್ನೇಹದ ಕಂಪು ಚೆಲ್ಲಲು
ಉಜ್ವಲ ನಾಳೆಯ ಕನಸ ನನಸಾಗಿಸಲು.
ಬಂತದೋ ನೋಡಿಲ್ಲಿ ಹೊಸ ವರುಷ,
ತಂತದೋ ಮಡಿಲಲ್ಲಿ ಜಗಕೆ ಹರುಷ.
ಸಮಸ್ತರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.

ಮೂಲತಃ ಒಳ್ಳೆಯ ಗಾಯಕಿಯಾಗಿರುವ ತಮಗೆ, ಆಯಾಚಿತವಾಗಿ ಭಾವಗೀತೆಯ ಪಟ್ಟು ಕೈ ಹತ್ತಿದೆ.
ReplyDelete'ಹೊಸ ಅವಕಾಶ, ಹೃನ್ಮನ ತೆರೆಯಲು' ಎನ್ನುವ ಆಶಾಭಾವನೆಯ ಈ ಗೀತೆ ಮನೋಲ್ಲಾಸ ಉಕ್ಕಿಸುವಂತಿದೆ.