Wednesday 2 July 2014

ಭಲೇ ಬದುಕು!


ಮತ್ತದೇ ಜತನ, ಅದೇ ದಿನದಾಗುಹೋಗು
ನೋವ ಮಾಚಿಟ್ಟು ನಗುವ ಮೆರೆವ ಸೋಗು
ಬೇಕುಗಳ ಬಿಟ್ಟು ಬೇರೆಲ್ಲ ದೊರೆತ ಕೊರಗು
ಬೇಕುಗಳಿಗೆ ಸತತ ತುಡಿವ ಪರಿಯ ಬೆರಗು!

ಎದ್ದೆ ಎನ್ನುವಷ್ಟರಲಿ ಮತ್ತೊಂದು ಮೊಟಕು,
ಬೆರೆಯುವ ಮುನ್ನವೇ ಬೇರಾಗುವ ಅಳುಕು
ಕಂಡೊಡನೆ ಮಿಂಚಿ ಮರೆಯಾಗುವ ಬೆಳಕು
ಬೀಗಿಸಿ ಬೀಳಿಸಿ ಅಳಿಸಿ ತಾ ನಗುವ ಬದುಕು!

ಎಡವಿಸಲೆಂದೇ ಕಾಯುವ ಸೆಳೆತದ ಬುರುಗು
ದಿನವೂ ಕಣ್ಣು-ಮುಚ್ಚಾಲೆಯಾಟದ ಸೊಬಗು!
ಅನತಿ ದೂರದಲಿ, ಮಾಯಾಜಿಂಕೆಯ ಕೂಗು
ಸುಖ-ದು:ಖಗಳ ಕೋರೈಸುವ ಕತ್ತಿಯಲಗು!

2 comments:

  1. ಮಾಚಿಟ್ಟು, ಕತ್ತಿಯಲುಗು ಪದಗಳನ್ನು ಬಳಸಿಕೊಂಡ ರೀತಿ ಸಮಯೋಚಿತವಾಗಿದೆ.
    ಅಸಲಿಯತ್ತನ್ನು ಮರೆಮಾಚಿಕೊಂಡೇ ಬದುಕಲೇ ಬೇಕಾದ ಅನಿವಾರ್ಯತೆ ನಮ್ಮದೆಲ್ಲದೂ ಆಗಿರುವುದು ನಮ್ಮ ವಿಪರ್ಯಾಸ!

    ReplyDelete
  2. ಎದ್ದೆ ಎನ್ನುವಷ್ಟರಲಿ ಮತ್ತೊಂದು ಮೊಟಕು
    ಬೆರೆಯುವ ಮುನ್ನವೇ ಬೇರಾಗುವ ಅಳುಕು

    ReplyDelete