Tuesday 12 March 2013

ಅನುರಾಗದನುಭೂತಿ





ಕೆಲವೇ ಕ್ಷಣಗಳ ಆಮೋದ
ಮೆಲ್ಲುವಾಗಲದೇ ಆಹ್ಲಾದ
ಮೆದ್ದಂತೆ ಹಿಗ್ಗುವ ಆನಂದ
ತನು ಮನ ರಂಜಿಪ ಸ್ವಾದ

ಬೆಸೆಯುತಿರೆ ಒಲವ ಬಂಧ,
ಹಿಮ್ಮೇಳವಿರೆ ವಸಂತನಂದ,
ಜತೆ ತೀಡಿಪ ಸುಮಸುಗಂಧ
ನಾಚಿ ರಂಗಾದ ಬಾನಿನಂದ!

ಬುವಿಯಾಗಿರೆ ನಾಕ ನಿನ್ನಿಂದ,
ಕಲರವದಲೂ ಪ್ರೇಮನಿನಾದ.
ಮನ ಸ್ವಾದಿಸಿರೆ ನವವಿನೋದ
ಹಸಿರೀ ಅನುರಾಗದನುಬಂಧ!

1 comment:

  1. ಅನುರಾಗವೇ ಹಾಗೇ ಅದು ತಾಕೀ ತಾಕದ ಮಧುರಾನುಭೂತಿ. ಅದನ್ನಿಲ್ಲಿ ಕವಿಯತ್ರಿ ಮನೋಹರವಾಗಿ ಕಟ್ಟಿಕೊಟ್ಟಿದ್ದಾರೆ.

    ReplyDelete