Saturday 2 February 2013

ಶ್ರದ್ಧೆ


ಕುಳಿತು ಕಾಯುತಿರೆ ಬರದು ನಿನ್ನ ಸರತಿ
ಜತೆಯಿರೆ ಯತನ ತಪ್ಪಿಸರಾರು ಕೀರುತಿ

ಸರಿಯಿರೆಯೆಮ್ಮ ದಿಟ್ಟಿ ನೇರವಿರೆ ದಾರಿ,
ಅಳುಕ ಮಸುಕಲಿ ಮರೆಯಾಗದು ಗುರಿ.

ಸಾರಿಸದಿರೆ ನನ್ನೊಳಹೊಕ್ಕು ನಾನದನು,
ಬಾರರಾರು ತಡೆಯಲದ ನಾರುವುದನು.

ರಕುತದಲಿ ಎಮಗಿರದಿರೆಯಿನಿತು ಭಕುತಿ,
ಆ ಪಶುಪತಿಯೂ ನೀಡನೆಮಗೆ ಮುಕುತಿ!

3 comments:

  1. ಚೆನಾಗಿದೆ ಮೇಡಮ್...
    ಇಷ್ಟವಾಯ್ತು....
    ಹಮ್..ಅಲ್ಲಿ ಯತನ ಅಂದ್ರೆ ಯತ್ನ ಅಂತನಾ?ಅಥವಾ ಬೇರೆ ಏನಾದ್ರೂ ಅರ್ಥ ಇದ್ಯಾ??
    ..
    ಬರೆಯುತ್ತಿರಿ..
    ನಮಸ್ತೆ :)

    ReplyDelete
  2. 8 ಸಾಲುಗಳಲೇ ಬದುಕನು ಬೆಳಗಿಸುವ ನಿಮ್ಮ ಶ್ರದ್ಧೆ ನನಗೆ ನೆಚ್ಚಿಗೆಯಾಯ್ತು.

    ReplyDelete
    Replies
    1. ಬದ್ರೀನಾಥ್, ಚಿನ್ಮಯ್ ತಮಗೆ ತುಂಬು ಹೃದಯದ ಧನ್ಯವಾದಗಳು. ಹೌದು, ಚಿನ್ಮಯ್ ಅದು ಯತ್ನದ ತದ್ಭವರೂಪ. ಜತನ ಕೂಡಾ ಹೇಳುತ್ತಾರೆ.

      Delete