Tuesday 18 September 2012

ಆಗ-ಈಗ


ಚಿತ್ರ: ಗೂಗಲ್ ಕೃಪೆ

ಬಂಧುಗಳ ಜತೆಯಾಗ ನಕ್ಕು ನಲಿಯುತಿರೆ,
ಹಣದಿಂದ ಸಂತಸವೆಂದು ಕೇಳರಿಯದಿರೆ,
ಗಂಜಿ ಮೊಸರನ್ನವೂ ಮೃಷ್ಟಾನ್ನ ಅನಿಸಿರೆ,
ಅಭಿವೃದ್ಧಿಯಲಿತ್ತು ಸಹೃದಯತೆಯ ಮುದ್ರೆ!

ಅಭಿವೃದ್ಧಿಯು ಈಗಂತೂ ಮನೆಮಾತು!
ವೃದ್ಧ ಹಣದ ಥೈಲಿ ಮಕ್ಕಳಿಗೂ ಗೊತ್ತು,
ದಿನದಿನಕೆ ವರ್ಧಿಸುತಿದೆ ದೇಹದ ಸುತ್ತು!
ರೋಗಗಳ ವೃದ್ಧಿ ತಂದೊಡ್ಡಿದೆ ವಿಪತ್ತು!

ಹಬ್ಬಹರಿದಿನದಿ ಆಗ ಹರ್ಷದಿ ಗಡಿಬಿಡಿ,
ಈಗೋ ಪ್ರತಿದಿನ ಎಲ್ಲರಿಗೂ ಗಡಿಬಿಡಿ!
ಹಲವು ದಿಕ್ಕಲಿ ಸಂಸಾರವೇ ಬಿಡಿಬಿಡಿ!
ಜೀವನವೇ ಸುಸ್ತು, ಯಾಂತ್ರಿಕ ಭರದಡಿ!

ಮನೆಗೊಂದು ಮಗುವೂ ಕಷ್ಟದಲಿ ವರದಿ,
ಆದರೂ ಕೂಗಾಟ-ಜನಸಂಖ್ಯೆಯ ವೃದ್ಧಿ!
ಕಾರುಗಳ ಜತೆ ಬಡವನ ಗೋಳೂ ವೃದ್ಧಿ
ನಮ್ಮ ಸಂಬಂಧಗಳ ಅಂತರದಲೂ ವೃದ್ಧಿ!

ಭವ್ಯ ಮೌಲ್ಯಗಳ ಮನೆಯಾಗ ತೀರ್ಥಕ್ಷೇತ್ರ
ನವ್ಯತೆಯ ಗುಂಗಿನ ಮನೆಯೀಗ ಕುರುಕ್ಷೇತ್ರ!


2 comments:

  1. ಹಲವು ದಿಕ್ಕಲಿ ಸಂಸಾರವೇ ಬಿಡಿಬಿಡಿ!
    ಜೀವನವೇ ಸುಸ್ತು, ಯಾಂತ್ರಿಕ ಭರದಡಿ!

    ನವ್ಯತೆಯ ಗುಂಗಿನ ಮನೆಯೀಗ ಕುರುಕ್ಷೇತ್ರ!

    ವಾಹ್ ವಾ!! ಎಂತಹ ಸುಂದರ ಸಾಲುಗಳು. ಒಟ್ಟಾರೆ ಪ್ರಸಕ್ತ ಸಾಮಾಜಿಕ ಮತ್ತು ಸಂಸಾರಿಕ ವಿದ್ಯಮಾನವನ್ನು ಸೂಕ್ತಸಾಲುಗಳಲ್ಲಿ ಹೆಣೆದು ನಮಗೆ ಉಣ ಬಡಿಸಿದ್ದೀರಿ. ಧನ್ಯವಾದಗಳು.

    ReplyDelete
  2. ಎರಡೂ ಪ್ರಸ್ತುತಿ ಚೆನ್ನಾಗಿದೆ. ಅಂದು ಇಂದುಗಳ ಸಿಂಹಾವಲೋಕನದಲಿ ಮಿಂದೆದ್ದ ಕವಿತೆ ಮೇರು!

    ReplyDelete