Friday 7 September 2012

ಗುಪ್ತ ಗಾಮಿನಿ!

ಚಿತ್ರ: ಗೂಗಲ್ ಕೃಪೆ

ಆಂತರ್ಯದೊಳ ನೋಡಲು, ಮೆತ್ತಿದ ಪಾಚಿ,
ಅಣಕಿಸಿದೆ ಒಡಲನೊತ್ತಿದ ಕೊಳೆ ಮೇಲೆರಚಿ,
ಸಮ್ಮಾನಕಂಜಿ ಅಡಗಿ ಕುಳಿತಿದೆ ಎದೆಯವುಚಿ
ತೊಳೆಯದಿರೆ ಸಪ್ಪೆಯಾಗಿದೆ ಜಗದ ಸವಿರುಚಿ!

ನೀನರಿವೆ ನೀನಲ್ಲ, ಈ ಲೋಕ ಕಾಣುವ ರೂಪ!
ಒಂಟಿಯಾಗಿ ರೋದಿಸುತಿದೆ ಅನಿಸೆ ತಾನತ್ಯಲ್ಪ,
ಮೇಲೇರಿದಂತೆ ಸಾಧನಾಶಿಖರಶೃಂಗ ಲೋಪ!
ಸಾಧಿಸುವ ಹಂಬಲಕೆ ಅನಿವಾರ್ಯತೆಯ ಲೇಪ!

ಗೆಲುವಲೂ ಮನವ ಕಾಡುವ ಪಕ್ವತೆಯ ಆಕಾಂಕ್ಷೆ,
ತೊಳೆದಂತೆ ಚಿಗುರುವ ಪಾಚಿಯೆದುರು ಸಮೀಕ್ಷೆ,
ಅನವರತ ಶೋಧನೆಯಲೇ ಉತ್ತುಂಗದ ನಿರೀಕ್ಷೆ,
ಅಸ್ಪಷ್ಟತೆಯಲೇ ಮುನ್ನುಗ್ಗಿ ಬೆಳಕ ಕಾಂಬ ಅಪೇಕ್ಷೆ!

1 comment:

  1. ಒಳಗಿನ ಕಥನವು ಸರಿಯಾಗಿ ರೂಪಿತವಾಗಿದೆ.

    ಕವನದ ಲಯ ಮತ್ತು ಭಾವ ತೀವ್ರತೆ ತಟ್ಟುತದೆ.

    ReplyDelete